Download Our App

Follow us

Home » ರಾಜಕೀಯ » ಶಿಗ್ಗಾವಿ ಉಪಸಮರ. ಪಂಚಮಸಾಲಿಗಳಲ್ಲಿ ಗೊಂದಲ ಮೂಡಿಸಲು ರೆಡಿಯಾಯ್ತಾ ನಕಲಿ ಪಟ್ಟಿ ! ಈ ಪಟ್ಟಿ ರೆಡಿಯಾಗಿದ್ದು ಎಲ್ಲಿ ಗೊತ್ತಾ!

ಶಿಗ್ಗಾವಿ ಉಪಸಮರ. ಪಂಚಮಸಾಲಿಗಳಲ್ಲಿ ಗೊಂದಲ ಮೂಡಿಸಲು ರೆಡಿಯಾಯ್ತಾ ನಕಲಿ ಪಟ್ಟಿ ! ಈ ಪಟ್ಟಿ ರೆಡಿಯಾಗಿದ್ದು ಎಲ್ಲಿ ಗೊತ್ತಾ!

ಸಂಚು, ಸಂಚು, ಅಂತದೊಂದು ಸಂಚು ಕಾಂಗ್ರೇಸ್ಸಿನ ಒಳಗಡೆ ನಡಿತಾ ಇಲ್ಲಾ ಬಿಜೆಪಿಯೊಳಗೆ ನಡಿತಾ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಸಂಜೆ 4 ರ ಸುಮಾರಿಗೆ ಸುನಾಮಿ ತರ ಬೀಸಿ ಬಂದ ಕಾಂಗ್ರೇಸ್ ಅಭ್ಯರ್ಥಿಗಳ ಹೆಸರಿದ್ದ ಪಟ್ಟಿ, ಶಿಗ್ಗಾವಿ ಕ್ಷೇತ್ರದಲ್ಲಷ್ಟೆ ಅಲ್ಲ, ಹತ್ತಿರದ ನಾಲ್ಕೈದು ಜಿಲ್ಲೆಗಳಲ್ಲಿ ಸಂಚಲನ ಮೂಡಿಸಿದೆ 

ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣದ ನಂತರ ಅತೀ ಹೆಚ್ಚು ಸುದ್ದಿ ಮಾಡುತ್ತಿರುವ ಶಿಗ್ಗಾವಿ ಕ್ಷೇತ್ರದಲ್ಲಿ ಸರ್ರನೇ, ಕಾಂಗ್ರೇಸ್ಸಿನ ಒಂದು ನಕಲಿ ಅಭ್ಯರ್ಥಿಗಳ ಪಟ್ಟಿ ಹರಿದಾಡಿದ್ದು ಮಾತ್ರ ಗೊಂದಲ ಸೃಷ್ಟಿಸಿತ್ತು. 

ಶಿಗ್ಗಾವಿ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆಯಾಗುವದಕ್ಕಿಂತ ಮೊದಲೇ ಕೆ ಸಿ ವೇಣುಗೋಪಾಲ್ ಸಹಿ ಇರುವ ಪಟ್ಟಿಯಲ್ಲಿ ವೈಶಾಲಿ ಕುಲಕರ್ಣಿ ಹೆಸರು ತೇಲಿ ಬರುವಂತೆ ಮಾಡಿತ್ತು. ಇದು ಶಿಗ್ಗಾವ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಬಂದಿತ್ತು.

ಶಿಗ್ಗಾವಿ ಕ್ಷೇತ್ರಕ್ಕೆ ಕಾಂಗ್ರೇಸ್ಸಿನಿಂದ ಸ್ಪರ್ಧೆ ಮಾಡಲು ಶಾಸಕ ವಿನಯ ಕುಲಕರ್ಣಿಯವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ, ಮಗಳು ವೈಶಾಲಿ ಕುಲಕರ್ಣಿ ಪ್ರಯತ್ನ ನಡೆಸಿದ್ದು ಸುಳ್ಳಂತು ಅಲ್ಲ. ಅದೇ ರೀತಿ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಹಾಗೂ ಯಾಸಿರ್ ಖಾನ್ ಪಠಾಣ ಹೆಸರು ಸುದ್ದಿಯಲ್ಲಿತ್ತು. 

ಇನ್ನೇನು ಘೋಷಣೆಯಾಗಿಯೇ ಬಿಟ್ಟಿತು ಅನ್ನುವ ರೀತಿಯಲ್ಲಿ ಪಟ್ಟಿ ಬಿಡುಗಡೆಯಾಗಿದ್ದು, ನಂತರ ಅದು ನಕಲಿ ಅನ್ನೋದು ಗೊತ್ತಾಗಿದೆ. 

ಪಂಚಮಸಾಲಿಗಳಲ್ಲಿ ಗೊಂದಲ ಸೃಷ್ಟಿಸಲು ನಡೆಯಿತಾ ಸಂಚು! 

ಎ ಐ ಸಿ ಸಿ ಇಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ ಎಂದು ನಕಲಿ ಪಟ್ಟಿ ಮಾಡಿ ಹರಿಬಿಟ್ಟಿದ್ದರ ಹಿಂದೆ ಪಂಚಮಸಾಲಿ ಸಮುದಾಯದ ದಾರಿ ತಪ್ಪಿಸುವ ಸಂಚು ನಡೆದಿದೆ ಎನ್ನಲಾಗಿದೆ. ವೈಶಾಲಿ ಕುಲಕರ್ಣಿಯವರಿಗೆ ಕಡೆ ಕ್ಷಣದಲ್ಲಿ ಟಿಕೇಟ್ ತಪ್ಪಿಸಲಾಯಿತು ಎಂದು ಆರೋಪ ಹೊರಿಸಲು ಇಂತಹ ಸಂಚು ಬಿಜೆಪಿಯ ಐ ಟಿ ಸೇಲ್ ನಿಂದ ನಡೆದಿದೆ ಎಂಬ ಆರೋಪ ಹೊರಿಸಲಾಗುತ್ತಿದೆ.

ಒಟ್ಟಾರೆ ಇಂತಹದೊಂದು ಕಾಂಗ್ರೇಸ್ ಅಭ್ಯರ್ಥಿಗಳ ನಕಲಿ ಪಟ್ಟಿ ಹೊರಬಿದ್ದು ದಾರಿ ತಪ್ಪಿಸುವ ಕೆಲಸ ನಡೆದಿದ್ದು ಮೊದಲೇನಲ್ಲ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!