ಕರ್ನಾಟಕ ಫೈಲ್ಸ್ ಇಂದು ಧಾರವಾಡ ಜಿಪಂ ನರೇಗಾ ಬಾಬು ಬಗ್ಗೆ ಸುದ್ದಿ ಪ್ರಕಟ ಮಾಡುತ್ತಿದ್ದಂತೆ ಇಬ್ಬರು ಪ್ರಖ್ಯಾತ ಪತ್ರಕರ್ತರು ಬಾಬು ದೇಸಾಯಿಯನ್ನು ಭೇಟಿಯಾಗಿ, ಅವರ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ಸದಾ ಬೆನ್ನಿಗೆ ನಿಲ್ಲುವದಾಗಿ ಭರವಸೆ ನೀಡಿದ್ದಾರೆ.
ಮೊರಬ ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಬೇಕಾದ ಬಾಬು ದೇಸಾಯಿ ಅಲ್ಲಿ ಹೋಗಿಯೇ ಇಲ್ಲ ಅನ್ನೋದು ಧಾಖಲೆಗಳು ಹೇಳುತ್ತವೆ.
ಜಿಲ್ಲಾ ಮಂತ್ರಿ ನನ್ನ ಜೇಬಿನಲ್ಲಿದ್ದಾರೆ ಅನ್ನೋ ಅರ್ಥದಲ್ಲಿ ನರೇಗಾ ಬಾಬು, ಇಂದು ಕೆಲವರ ಜೊತೆ ಮಾತನಾಡಿದ್ದಾರಂತೆ.
ಜಿಲ್ಲಾ ಮಂತ್ರಿಗಳ ಅಪ್ತ ಸಹಾಯಕರ ಜೊತೆ ಅನನ್ಯ ಸಂಬಂಧ ಹೊಂದಿರುವ ಬಾಬು ದೇಸಾಯಿ, ಅವರ ಕೃಪಾಕಟಾಕ್ಷದೊಂದಿಗೆ ಧಾರವಾಡ ಜಿಪಂ ನಲ್ಲಿ ಗೂಟ ಬಡೆದುಕೊಂಡು ಕುಂತಿದ್ದಾರೆ.
ಬೇಕಿದ್ದರೆ, ಸಿಇಓ ವರ್ಗಾವಣೆ ಆಗ್ತಾರೆ, ನನಗೆ ಮುಟ್ಟೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಬಾಬು ದೇಸಾಯಿಯವರು ಕೆಲವರ ಮುಂದೆ ಹೇಳುತ್ತಿದ್ದು, ಕರ್ನಾಟಕ ಫೈಲ್ಸ್ ಅವರ ಸವಾಲು ಸ್ವೀಕರಿಸಿದೆ.
ಕರ್ನಾಟಕ ಫೈಲ್ಸ್, ಧಾರವಾಡ ಜಿಪಂ ನಲ್ಲಿ ಹೇಗೆ ಅವ್ಯವಹಾರ ನಡೆಯುತ್ತದೆ, ಯಾರೆಲ್ಲ ಸಾಥ ನೀಡ್ತಾರೆ, ಯಾರ ನಂಬರಿಗೆ ಪಿಡಿಓಗಳು ಹಾಗೂ ಗುತ್ತಿಗೆ ಇಂಜಿನಿಯರಗಳು ಫೋನ್ ಪೇ ಮಾಡ್ತಾರೆ. ಹೇಗೆ ಆಕ್ರಮ ವ್ಯವಹಾತ ನಡೆಯುತ್ತದೆ ಅನ್ನೋದರ ಬಗ್ಗೆ ಅಧಿಕೃತ ಧಾಖಲೆಯೊಂದಿಗೆ ಕರ್ನಾಟಕ ಫೈಲ್ಸ್ ಸುದ್ದಿ ಪ್ರಕಟ ಮಾಡಲಿದೆ.





