Download Our App

Follow us

Home » ಕಾನೂನು » ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ಐಎಎಸ್ ಅಧಿಕಾರಿ ಇದ್ದರು, ನರೇಗಾ ಬಾಬು ಹೇಳಿದ್ದೆ ಫೈನಲ್

ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ಐಎಎಸ್ ಅಧಿಕಾರಿ ಇದ್ದರು, ನರೇಗಾ ಬಾಬು ಹೇಳಿದ್ದೆ ಫೈನಲ್

ಧಾರವಾಡ ಜಿಲ್ಲಾ ಪಂಚಾಯತಿಗೆ ಓರ್ವ ಐಎಎಸ್ ಅಧಿಕಾರಿ, ಸಿ ಇ ಓ ಆಗಿದ್ದರು, ಅಲ್ಲಿರುವ ನರೇಗಾ ಬಾಬು ಮಾತೇ ಅಂತಿಮ ಅನ್ನೋ ಮಟ್ಟಕ್ಕೆ ಜಿಪಂ ಬಂದು ನಿಂತಿದೆ. 

ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ದಶಕಗಳಿಂದ ತಳಯೂರಿರುವ ಬಾಬು ದೇಸಾಯಿ ಎಂಬುವವರು ಕರ್ನಾಟಕ ಸರ್ಕಾರ 2018 ರಲ್ಲಿ ಹೊರಡಿಸಿದ ಆದೇಶ ಉಲ್ಲಂಘನೆ ಮಾಡಿ ಜಿಪಂ ನಲ್ಲಿ ನರೇಗಾ ಯೋಜನೆ ನೋಡಿಕೊಳ್ಳುತ್ತಿದ್ದಾರೆ. 

ಉದ್ಯೋಗ ಖಾತ್ರಿ ಯೋಜನೆಯ, ಸಾಮಾಜಿಕ ಲೆಕ್ಕ ಪರಿಶೋಧನಾ ವಿಷಯದಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖವಾಗಿದೆ.

ಇಷ್ಟೆಲ್ಲಾ ಅವ್ಯವಹಾರ ನಡೆದರೂ, ಪಿಡಿಓಗಳಿಗೆ ಬಾಬು ದೇಸಾಯಿಯವರು ಬೆನ್ನೆಲುಬಾಗಿ ಇರ್ತಾರೆ ಅನ್ನೋ ಮಾತು ಜನಜನಿತವಾಗಿದೆ. 

ಗ್ರಾಮ ಪಂಚಾಯತಿಯಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಣೆ ಮಾಡಬೇಕಾದಂತ ಬಾಬು ದೇಸಾಯಿ ಎಂಬುವವರು ಒಂದು ದಶಕದಿಂದ ಜಿಲ್ಲಾ ಪಂಚಾಯತಿಯ ಕೇಂದ್ರ ಕಚೇರಿಯಲ್ಲಿ ಠಿಕಾಣಿ ಹೂಡಿದ್ದಾರೆ. 

2018 ರ ಸರ್ಕಾರದ ಆದೇಶ ಉಲ್ಲಂಘಿಸಿ, ಕಾನೂನು ಬಾಹಿರವಾಗಿ ಮೇಲಾಧಿಕಾರಿಗಳಿಂದ ನಿಯೋಜನೆ ಮಾಡಿಕೊಂಡು ಜಿಲ್ಲಾ ಪಂಚಾಯತಗೆ ಬಂದಿದ್ದಾರೆ.

ಗ್ರಾಮ ಪಂಚಾಯತನಲ್ಲಿ ಕೆಲಸ ಮಾಡುವವರು ಜಿಲ್ಲಾ ಪಂಚಾಯತನಲ್ಲಿ ಕೆಲಸ ಮಾಡುವ ಹಾಗಿಲ್ಲ ಎಂದು ಸರ್ಕಾರ 2018 ರಲ್ಲಿ ಆದೇಶ ಮಾಡಿದೆ. ಆದರೂ ಮೇಲಾಧಿಕಾರಿಗಳಿಗೆ ಕೈ ಬಿಸಿ ಮಾಡಿ, ನಿಯೋಜನೆ ಮೇಲೆ ಕೇಂದ್ರ ಕಚೇರಿಯಲ್ಲಿ ಬಂದು ಕೂತಿದ್ದಾರೆ. 

ಬಾಬು ದೇಸಾಯಿಯವರು ನರೇಗಾ ಯೋಜನೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಐಎಎಸ್ ಅಧಿಕಾರಿಯಾಗಿರುವ ಸಿಇಓ ಭುವನೇಶ ಪಾಟೀಲರನ್ನೇ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!