Download Our App

Follow us

Home » ಶಿಕ್ಷಣ » ಈ ಗ್ರಾಮದಲ್ಲಿ ಪ್ರತಿನಿತ್ಯ ಎರಡು ಘಂಟೆಗಳ ಕಾಲ ಮೊಬೈಲ್, ಟಿವಿ ಬಂದ್ ! ಅಚ್ಚರಿ…

ಈ ಗ್ರಾಮದಲ್ಲಿ ಪ್ರತಿನಿತ್ಯ ಎರಡು ಘಂಟೆಗಳ ಕಾಲ ಮೊಬೈಲ್, ಟಿವಿ ಬಂದ್ ! ಅಚ್ಚರಿ…

ಅದು ಕರ್ನಾಟಕದ ಗಡಿ ಭಾಗದಲ್ಲಿರುವ ಹಳ್ಳಿ. ಸಂಜೆ ಆದ್ರೆ ಸಾಕು ಆ ಹಳ್ಳಿಯಲ್ಲಿ ಸೂಜಿ ಬಿದ್ದರು ಸಪ್ಪಳ ಕೇಳುತ್ತದೆ. ಅಷ್ಟೊಂದು ಪ್ರಶಾಂತ ವಾತಾವರಣ ಆ ಹಳ್ಳಿಯಲ್ಲಿ ನೆಲೆಗೊಳ್ಳುತ್ತದೆ.

ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿರುವ ಹಾಲಗಾ ಗ್ರಾಮ ಇದೀಗ ಸುದ್ದಿ ಮಾಡುತ್ತಿದೆ. ಹಾಲಗಾ ಗ್ರಾಮದಲ್ಲಿ ಪ್ರತಿ ದಿನ ಸಂಜೆ 7 ರಿಂದ 9 ಘಂಟೆಯ ವರೆಗೆ ಮಕ್ಕಳು ಅಭ್ಯಾಸ ಮಾಡಲಿ ಎಂಬ ಕಾರಣಕ್ಕೆ ಮೊಬೈಲ್ ಹಾಗೂ ಮನೆಯಲ್ಲಿನ ಟಿವಿ ಗಳನ್ನು ಬಂದ ಮಾಡಲಾಗುತ್ತದೆ. 

ಸಂಜೆ 7 ಘಂಟೆಯಾಗುತ್ತಿದ್ದಂತೆ ಗ್ರಾಮದಲ್ಲಿ ಅಳವಡಿಸಲಾಗಿರುವ ಸೈರನ್ ಮೊಳಗುತ್ತದೆ.

ಸೈರನ್ ಶಬ್ದ ಕೇಳಿ ಬರುತ್ತಿದ್ದಂತೆ ಗ್ರಾಮದ ಪ್ರತಿಯೊಬ್ಬರು ತಮ್ಮ ಕೈಯಲ್ಲಿರುವ ಮೊಬೈಲ್ ಗಳನ್ನು ಬಂದ ಮಾಡುತ್ತಾರೆ. ಅಲ್ಲದೇ ಮನೆಯಲ್ಲಿನ ಟಿವಿ ಗಳನ್ನು ಬಂದ ಮಾಡಲಾಗುತ್ತದೆ.

ಸಂಜೆ 7 ರಿಂದ 9 ರ ವರೆಗೆ ಪ್ರತಿಯೊಬ್ಬ ವಿದ್ಯಾರ್ಥಿ ಕಡ್ಡಾಯವಾಗಿ ಅಭ್ಯಾಸ ಮಾಡಬೇಕು ಎಂಬ ಸೂಚನೆ ನೀಡಲಾಗಿದೆ.

ಗ್ರಾಮದ ಮಕ್ಕಳ ವಿಧ್ಯಾಭ್ಯಾಸಕ್ಕೆ ಹಾಲಗಾ ಗ್ರಾಮದ ಜನ ಪ್ರೋತ್ಸಾಹ ನೀಡುತ್ತಿದ್ದು, ಹಾಲಗಾ ಗ್ರಾಮ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!