Download Our App

Follow us

Home » ಭಾರತ » ಕೇಂದ್ರ ಬಜೆಟ್ – ಕರ್ನಾಟಕದ ಪಾಲಿಗೆ ಶೂನ್ಯ / ಶಿವಲೀಲಾ ಕುಲಕರ್ಣಿ

ಕೇಂದ್ರ ಬಜೆಟ್ – ಕರ್ನಾಟಕದ ಪಾಲಿಗೆ ಶೂನ್ಯ / ಶಿವಲೀಲಾ ಕುಲಕರ್ಣಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಇಂದು ಮಂಡಿಸಿರುವ 2026-27ನೇ ಸಾಲಿನ ಬಜೆಟ್ ಸಂಪೂರ್ಣವಾಗಿ “ನೀರಸ” ಹಾಗೂ ದಿಕ್ಕು ದೆಸೆಯಿಲ್ಲದ ಬಜೆಟ್ ಆಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಹೇಳಿದ್ದಾರೆ. 

ಇದು ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು, ಸಾಮಾನ್ಯ ಜನರ ಸಂಕಷ್ಟಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ. ಕರ್ನಾಟಕದ ನಗರ ಪ್ರದೇಶಗಳು ವೇಗವಾಗಿ ಬೆಳೆಯುತ್ತಿವೆ. ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರದಿಂದ ವಿಶೇಷ ಪ್ಯಾಕೇಜ್ ನಿರೀಕ್ಷಿಸಲಾಗಿತ್ತು.

ಆದರೆ, ನಗರ ನೀರು ಸರಬರಾಜು ಯೋಜನೆಗಳಿಗೆ ಯಾವುದೇ ಹೆಚ್ಚಿನ ಅನುದಾನ ನೀಡದೆ ಕೇಂದ್ರ ಸರ್ಕಾರವು ಕರ್ನಾಟಕದ ನಗರವಾಸಿಗಳಿಗೆ ಅನ್ಯಾಯ ಮಾಡಿದೆ ಎಂದು ಶಿವಲೀಲಾ ಆರೋಪಿಸಿದ್ದಾರೆ.

 

 

 

Karnataka Files
Author: Karnataka Files

Leave a Comment

RELATED LATEST NEWS

error: Content is protected !!