ಯರಗಟ್ಟಿ ಪಟ್ಟಣದಲ್ಲಿ ಸಮಾನ ಮನಸ್ಕ ಸಾರ್ವಜನಿಕರು ಕೂಡಿ ಯರಗಟ್ಟಿ ಪಟ್ಟಣದ ತಹಶಿಲ್ದಾರ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಜಿತಕುಮಾರ್ ದೇಸಾಯಿ ಮಾತನಾಡಿ ಯರಗಟ್ಟಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ಅನುಕೂಲ ಆಗುವ ಪ್ರಜಾಸೌಧ ನಿರ್ಮಾಣ ಸ್ಥಳದಲ್ಲಿ ಮಾಡಿದರು
ಈ ವೇಳೆ ಕರವೇ ಅಧ್ಯಕ್ಷ ರಫೀಕ್ ಡಿಕೆ ಮಾತನಾಡಿ ಒಂದಿಷ್ಟು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು, ನಿಮ್ಮಿಂದ ದೂರ ಇರುವ ಸ್ಥಳದಲ್ಲಿ ನಿರ್ಮಾಣ ಮಾಡುತ್ತಿರುವ ಪ್ರಜಾಸೌಧ ಸ್ಥಳವನ್ನು ಕೈಬಿಟ್ಟು ಸಾರ್ವಜನಿಕರಿಗೆ ಅನುಕೂಲ ಆಗುವ ಸ್ಥಳದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಬರುವ ದಿನದಲ್ಲಿ ಉಗ್ರವಾದ ಹೋರಾಟ ಮಾಡುವದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂತೋಷ್ ಹಾದಿಮನಿ, ಕೃಷ್ಣಮೂರ್ತಿ ತೋರಗಲ್, ರತ್ನಾಕರ್ ಶೆಟ್ಟಿ, ಅಶೋಕ್ ಅಂಗಡಿ ಇಮ್ತಿಯಾಜ್ ಖಾದ್ರಿ, ಎಸ್ ಎಸ್ ಮುಗಳಿ, ಸೋಮು ರಾಯನಾಪುರ ಸೇರಿದಂತೆ ಹಲವಾರು ಸಂಘಟನೆಗಳ ಸದಸ್ಯರು ಸೇರಿದಂತೆ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.
Author: Karnataka Files
Post Views: 104




