Download Our App

Follow us

Home » ಕಾನೂನು » ನವಲಗುಂದ : ಮತದಾರರ ಪಟ್ಟಿ ಪರಿಷ್ಕರಣೆ : ಎಷ್ಟು ಜನಕ್ಕೆ ನೋಟಿಸ್ ಕೊಟ್ಟಿದ್ದಾರೆ ಗೊತ್ತಾ ?

ನವಲಗುಂದ : ಮತದಾರರ ಪಟ್ಟಿ ಪರಿಷ್ಕರಣೆ : ಎಷ್ಟು ಜನಕ್ಕೆ ನೋಟಿಸ್ ಕೊಟ್ಟಿದ್ದಾರೆ ಗೊತ್ತಾ ?  

 

ಚುನಾವಣಾ ಆಯೋಗ ಈಗಾಗಲೇ ಮತದಾರರ ಪಟ್ಟಿಯನ್ನು ಪರಿಷ್ಕರಣೆ ನಡೆಸಿದ್ದು, ಇದೀಗ ದೋಷ ಕಂಡು ಬಂದವರಿಗೆ ನೋಟಿಸ್ ನೀಡುತ್ತಿದೆ.

ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 234 ಮತಗಟ್ಟೆಗಳಲ್ಲಿ 16-06-2026 ರ ಮತಪಟ್ಟಿಯ ಪ್ರಕಾರ 2,16,962 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದರು.

2,16,962 ಮತದಾರರ ಪೈಕಿ 1,93, 334 ಜನರು SIR ದಲ್ಲಿ ಭಾಗವಹಿಸಿದ್ದಾರೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ASDDO ಎಂದರೆ Absent (ಗೈರುಹಾಜರಾದವರು), Shifted (ಸ್ಥಳಾಂತರಗೊಂಡವರು), Dead (ಮೃತಪಟ್ಟವರು), Duplicate (ನಕಲಿ),  ಮತ್ತು Others (ಇತರೆ) ಎಂದರ್ಥ.

ಪಟ್ಟಿಯಲ್ಲಿ ಹೆಸರಿದ್ದರೆ ನಿಮ್ಮ ಮತದಾನದ ಹಕ್ಕು ತಕ್ಷಣಕ್ಕೆ ರದ್ದಾಗಿದೆ ಎಂದಲ್ಲ, ನಿಮ್ಮ ದಾಖಲೆಗಳು ಪರಿಶೀಲನೆಯಲ್ಲಿದೆ ಎಂದರ್ಥ.

ಅಂತಹ 3927 ಜನರಿಗೆ ಚುನಾವಣಾ ಆಯೋಗ ಇದೀಗ. ನೋಟಿಸ್ ನೀಡಿದೆ.

        ನೋಟಿಸ್ ನೀಡಲು ಕಾರಣ

ವಯಸ್ಸಿನ ವ್ಯತ್ಯಾಸ

ತಂದೆ ಮತ್ತು ಮಗನ ನಡುವಿನ ವಯಸ್ಸಿನ ಅಂತರವು ತುಂಬಾ ಕಡಿಮೆಯಿರುವುದು (ಉದಾಹರಣೆಗೆ 15 ವರ್ಷಗಳಿಗಿಂತ ಕಡಿಮೆ).

ಮಾಹಿತಿ ಕೊರತೆ:

ಹೆಸರು, ವಿಳಾಸ ಅಥವಾ ಕುಟುಂಬದ ವಿವರಗಳಲ್ಲಿ ತಪ್ಪುಗಳು ಇರುವುದು.ಅಸಂಗತತೆ: ಒಬ್ಬ ವ್ಯಕ್ತಿಗೆ ಅಸಾಮಾನ್ಯ ಸಂಖ್ಯೆಯಲ್ಲಿ ಮಕ್ಕಳಿರುವುದು ಅಥವಾ ದಾಖಲೆಗಳ ಜೋಡಣೆಯಲ್ಲಿ ತಾರ್ಕಿಕ ದೋಷವಿರುವುದು.

ಇವೆಲ್ಲ ಕಾರಣಗಳಿಂದ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ.  ನೋಟಿಸ್ ಪಡೆದಿರುವ ಮತದಾರರು ಚುನಾವಣಾ ಆಯೋಗ ಸೂಚಿಸಿರುವ ಪೂರಕ ಧಾಖಲೆಗಳನ್ನು ನೀಡಿ, ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!