ಧಾರವಾಡ ಜಿಲ್ಲೆಯ ಕಾಂಗ್ರೇಸ್ ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಹುಬ್ಬಳ್ಳಿ ಪೂರ್ವ ಮೀಸಲು ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಬಹಿರಂಗವಾಗಿಯೇ, ಎಚ್ಚರಿಕೆ ಕೊಟ್ಟಿದ್ದಾರೆ. ” ನಿಮ್ಮನ್ನು ಇಲ್ಲೇ ಮುಗಿಸ್ತೀನಿ, ಸುಮ್ಮನೆ ಬಿಡಲ್ಲ ” ಎಂದು ಅಬ್ಬರಿಸಿರುವ ಪ್ರಸಾದ ಅಬ್ಬಯ್ಯ, ಇಲ್ಲಿ ನಿಮಗೆ ಇರಲು ಬಿಡಲ್ಲ, ಬೇರೆ ಪಕ್ಷಕ್ಕೆ ಹೋಗಿ ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಪ್ರಸಾದ ಅಬ್ಬಯ್ಯರ ಈ ಹೇಳಿಕೆ, ಕಾಂಗ್ರೇಸ್ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
Author: Karnataka Files
Post Views: 6





