Download Our App

Follow us

Home » ಕಾನೂನು » ಹಾದಿ ತಪ್ಪುತ್ತಿರುವ ನವಲಗುಂದ ಹುಡುಗರು

ಹಾದಿ ತಪ್ಪುತ್ತಿರುವ ನವಲಗುಂದ ಹುಡುಗರು

ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ನವಲಗುಂದದ ಹುಡುಗರು ದುಶ್ಚಟಗಳಿಗೆ ದಾಸರಾಗಿ ಹಾದಿ ತಪ್ಪುತ್ತಿದ್ದಾರೆ. ಕೆಲ ಹುಡುಗರು, ನವಲಗುಂದ ಪೊಲೀಸ ಠಾಣೆಯ ಜನಸ್ನೇಹಿ ಸಿಬ್ಬಂದಿಯ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅನ್ನೋ ಅನುಮಾನ ಮೂಡಿದೆ.

ನವಲಗುಂದದಲ್ಲಿ ಮಟ್ಕಾ, ಜೂಜು, ಗಾಂಜಾ ಸೇರಿದಂತೆ, ಆಕ್ರಮ ಸರಾಯಿ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ನವಲಗುಂದ ಹುಡುಗರು ದಾರಿ ತಪ್ಪಲು ಕಾರಣವಾಗಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಬಂಡಾಯದ ನೆಲ ನವಲಗುಂದಕ್ಕೆ ತನ್ನದೇ ಆದ ಇತಿಹಾಸವಿದೆ. ಸೌಹಾರ್ದತೆ ಸಾರುತ್ತಿರುವ ನಾಗಲಿಂಗೇಶ್ವರ ಮಠ, ಜ್ಞಾನ ಹಾಗೂ ಅನ್ನ ದಾಸೋಹಕ್ಕೆ ಹೆಸರಾದ ಗವಿಮಠ, ಶಿಕ್ಷಣ ಕ್ರಾಂತಿ ಮಾಡಿದ ಹಿರೇಮಠ, ಹೀಗೆ ಹಲವು ಕಾರಣಗಳಿಗಾಗಿ ನವಲಗುಂದ ಪ್ರಸಿದ್ದಿ ಪಡೆದಿದೆ.

ಆತಂಕಕಾರಿ ವಿಚಾರ ಏನೆಂದರೆ, ಇತ್ತೀಚಿಗೆ ದುಶ್ಚಟಗಳಿಗೆ ಬಲಿಯಾಗಿರುವ ಕೆಲವರು ಕಳ್ಳತನಕ್ಕೆ ಕೈ ಹಾಕುತ್ತಿದ್ದು, ನವಲಗುಂದದ ಹೆಸರಿಗೆ ಕುತ್ತು ತರುತ್ತಿದ್ದಾರೆ. ದಕ್ಷತೆ ಮತ್ತು ಕರ್ತವ್ಯ ಪ್ರಜ್ಞೆಗೆ ಹೆಸರಾಗಿರುವ ನವಲಗುಂದ ಪೊಲೀಸ್ ಠಾಣೆಯ ಪಿ ಎಸ್ ಐ ಹಾಗೂ ಇನ್ಸಪೆಕ್ಟರ ಮತ್ತು ಸಿಬ್ಬಂದಿ ಮೈಕೊಡವಿಕೊಂಡು ಎದ್ದೇಳಬೇಕು ಅನ್ನೋ ಕೂಗು ಹೆಚ್ಚಾಗಿದೆ. ಕಾನೂನು ಸುವ್ಯವಸ್ಧೆ ಸರಿಯಾಗಿದ್ದರು ಸಹ, ಕ್ರೈಮ್ ಗಳು ಹೆಚ್ಚುತ್ತಿರುವದು ಆತಂಕಕ್ಕೆ ಕಾರಣವಾಗಿದೆ. ಪೊಲೀಸರಿಗಿಂತ ಮೊದಲು ಪಾಲಕರು ಸಹ ತಮ್ಮ ತಮ್ಮ ಮಕ್ಕಳ ಚಲನವಲನದ ಮೇಲೆ ನಿಗಾ ಇಡಬೇಕಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!