ಹುಬ್ಬಳ್ಳಿಯ ಶಹರ ಠಾಣೆಯ ಕ್ರಿಮಿನಲ್ ಆರೋಪಿಯೊಬ್ಬನ ಪರವಾಗಿ ನಿಂತು ಪ್ರತಿಭಟನೆ ಮಾಡಿದ ವಿಪಕ್ಷ ನಾಯಕ ಆರ್ ಅಶೋಕ ಸಂವಿಧಾನಕ್ಕೆ ಅಪಚಾರ ಬಗೆದಿದ್ದಾರೆ ಎಂದು ಕೆ ಪಿ ಸಿ ಸಿ ಸದಸ್ಯ ರಾಬರ್ಟ ದದ್ದಾಪುರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಆರ್ ಅಶೋಕ, ಠಾಣೆಗೆ ಮುತ್ತಿಗೆ ಹಾಕುವ ಯತ್ನ ಮಾಡಿ, ಆರೋಪಿಗಳಿಗೆ ಬೆನ್ನು ತಟ್ಟುವ ಕೆಲಸ ಮಾಡಿದ್ದು, ಆರ್ ಅಶೋಕ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಮತೀಯ ಕೋಮು ಸಂಘರ್ಷವುಂಟು ಮಾಡುವ ಪ್ರಯತ್ನದಲ್ಲಿ ಬಿಜೆಪಿ ಮುಂದಾಗಿದ್ದನ್ನು ಅವರು ಖಂಡಿಸಿದ್ದಾರೆ. ಈ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
Author: Karnataka Files
Post Views: 5





