ಶ್ರೀಕಾಂತ ಪೂಜಾರಿ ಎಂಬ ಆರೋಪಿ ಬೆನ್ನಿಗೆ ನಿಂತು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ಬಿಜೆಪಿ, ಇನ್ಸಪೆಕ್ಟರ ಮುಸ್ಲಿಂ ಅನ್ನೋ ಕಾರಣಕ್ಕೆ ಅಮಾನತ್ತಿಗೆ ಆಗ್ರಹಿಸಿತ್ತು.
ಇದಕ್ಕೆ ಎದಿರೇಟು ಕೊಟ್ಟಿರುವ ಕಾಂಗ್ರೇಸ್ ನಾಯಕ ರಜತ್ ಉಳ್ಳಾಗಡ್ಡಿಮಠ, ಮಾಧ್ಯಮಗಳಿಗೆ ಹುಬ್ಬಳ್ಳಿ ಶಹರ ಠಾಣೆ ಇನ್ಸಪೆಕ್ಟರ ಮಹಮ್ಮದ ರಫೀಕ್ ತಹಸೀಲ್ದಾರರ ಕೆಲವು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ಸಪೆಕ್ಟರ ರಫೀಕ್ ತಹಸೀಲ್ದಾರ, ಹುಬ್ಬಳ್ಳಿಯ ಕೋಮು ಸೌಹಾರ್ದತೆಯ ಸಂಕೇತವಾಗಿ ಕೆಲಸ ಮಾಡುತ್ತಿದ್ದು, ಗಣೇಶ ಹಬ್ಬದಂದು ಹಿಂದು ಧಾರ್ಮಿಕ ಪದ್ಧತಿಯಂತೆ ಗಣೇಶನಿಗೆ ಪೂಜೆ ಸಲ್ಲಿಸಿ, ಸೌಹಾರ್ದತೆ ಮೆರೆದಿದ್ದಾರೆ.
ಬಿಜೆಪಿ ಅಧಿಕಾರದ ಅವಧಿಯಲ್ಲಿಯೂ ಶ್ರೀಕಾಂತ ಪೂಜಾರಿ ಮೇಲೆ ಕೇಸುಗಳು ಧಾಖಲಾದ ಬಗ್ಗೆ ಮಾತನಾಡದ ಬಿಜೆಪಿಗೆ ಈಗ ಹಿಂದುತ್ವ ನೆನಪಾಗಿದೆ ಎಂದು ರಜತ್ ಕಾಲೆಳೆದಿದ್ದಾರೆ. ರಫೀಕ್ ಮುಸ್ಲಿಂ ಅನ್ನೋ ಕಾರಣಕ್ಕೆ ಬಿಜೆಪಿ ದೊಡ್ಡ ರಾದ್ದಾಂತ ಮಾಡುತ್ತಿದ್ದು, ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Author: Karnataka Files
Post Views: 6





