ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ಎದುರು ಮೊನ್ನೆ ಶ್ರೀಕಾಂತ ಪೂಜಾರಿ ಬಂಧನ ವಿಷಯಕ್ಕೆ ಸಂಬಂಧಿಸಿದಂತೆ ಅಬ್ಬರಿಸಿದ್ದ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೇಸ್ ಇಂದು ಸದ್ದಿಲ್ಲದೇ ಬಂದು ದೂರು ನೀಡಿದೆ. ಹುಬ್ಬಳ್ಳಿಯ ಹೃದಯಭಾಗ ದುರ್ಗದಬೈಲಿನಲ್ಲಿರುವ ಶಹರ ಠಾಣೆ ಎದುರು ಬಿಜೆಪಿ ಪ್ರತಿಭಟನೆ ನಡೆಸಿ, ಇನ್ಸಪೆಕ್ಟರ ಹಾಗೂ ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ್ದಾರೆ ಎಂದು ಕಾಂಗ್ರೇಸ್ ಮುಖಂಡರು ಆರೋಪಿಸಿದ್ದಾರೆ.
ಇಂದು ಹುಬ್ಬಳ್ಳಿ ಶಹರ ಠಾಣೆಗೆ ಬಂದ ಕಾಂಗ್ರೇಸ್ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರರನ್ನು ನಿಂದಿಸಿದ್ದು, ಈ ಕುರಿತು ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೇಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಮುಖಂಡರಾದ ಬಂಗಾರೇಶ ಹಿರೇಮಠ, ಸದಾನಂದ ಡಂಗನವರ, ಶಾರುಖ ಮುಲ್ಲಾ, ಮೆಹರವಾಡೆ, ದೀಪಾ ಗೌರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Author: Karnataka Files
Post Views: 4





