ದುಡ್ಡು ಇದ್ದವ, ಜಾತಿ ಇದ್ದವ ಈಗ ಶಾಸಕನಾಗುತ್ತಿದ್ದು, ರಾಜಕಾರಣ ಬದಲಾಗಿದೆ. ಮೌಲ್ಯಯುತ ರಾಜಕಾರಣ ಈಗ ಕಣ್ಮರೆಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಧಾರವಾಡದಲ್ಲಿ ಎಚ್ ಕೆ ಪಾಟೀಲ ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಅವರು ಕೆಲ ಸತ್ಯ ಘಟನೆಗಳನ್ನು ತಿಳಿಸಿದರು. ಸಧ್ಯದ ರಾಜಕಾರಣ ದಿಂದ ಬೇಸತ್ತು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೆ ರಾಜೀನಾಮೆ ಕೊಡಬೇಕು ಎಂದುಕೊಂಡಿದ್ದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಗೆ ಸಾಹಿತಿಗಳು, ಸಂಗೀತಗಾರರು ಬರಬೇಕು, ಆದರೆ ಈಗ ಕಾಲ ಬದಲಾಗಿದ್ದು, ದುಡ್ಡಿದ್ದವರು ಶಾಸನ ಸಭೆಗೆ ಬರುತ್ತಿದ್ದು, ಸಂಗೀತಗಾರರು ಹಾಗೂ ಸಾಹಿತಿಗಳನ್ನು ಸದನದಲ್ಲಿ ಹುಡುಕಬೇಕಾಗಿದೆ ಎಂದು ಬಸವರಾಜ ಹೊರಟ್ಟಿಯವರು ಅಸಮಾಧಾನ ವ್ಯಕ್ತಪಡಿಸಿದರು.

Author: Karnataka Files
Post Views: 6





