ಕಾಂಗ್ರೇಸ್ ಹೈಕಮಾಂಡಗೆ ಕರ್ನಾಟಕ ಅಖಾಡಾ ಮುಖ್ಯವಾಗಿದ್ದು, ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗಳಿಸಲು ಕೈ ಪಡೆ ಸಜ್ಜಾಗಿದೆ. ಕರ್ನಾಟಕದಲ್ಲಿ ಇರುವ 28 ಸ್ಥಾನಗಳ ಪೈಕಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲು 9 ಕ್ಕೂ ಹೆಚ್ಚು ಸಚಿವರನ್ನು ಕಣ್ಣಕ್ಕಿಳಿಸಲು ತೀರ್ಮಾನಿಸಿದೆ.
ಚಾಮರಾಜನಗರದಿಂದ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹಾದೇವಪ್ಪ, ಕೋಲಾರದಿಂದ ಆಹಾರ ಸಚಿವ ಕೆ ಎಚ್ ಮುನಿಯಪ್ಪ, ಬೆಂಗಳೂರು ಸೆಂಟ್ರಲ್ ನಿಂದ ಇಂಧನ ಸಚಿವ ಕೆ ಜೆ ಜಾರ್ಜ, ಬೆಳಗಾವಿಯಿಂದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಬೆಂಗಳೂರು ದಕ್ಷಿಣದಿಂದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಬೆಂಗಳೂರು ಉತ್ತರದಿಂದ ಆರೋಗ್ಯ ಸಚಿವ ದಿನೇಶ ಗುಂಡೂರಾವ, ಹಾವೇರಿಯಿಂದ ಕಾನೂನು ಹಾಗೂ ಸಂಸದೀಯ ಸಚಿವ ಎಚ್ ಕೆ ಪಾಟೀಲರನ್ನು ಸ್ಪರ್ಧಿಸುವಂತೆ ಹೈಕಮಾಂಡ ಒತ್ತಡ ಹಾಕಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಹೈಕಮಾಂಡ ಸೂಚಿಸಿದರೆ ಸ್ಪರ್ಧಿಸಬೇಕಾಗುತ್ತದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದ್ದು, ಲೋಕಾ ಆಖಾಡಾ ತೀವ್ರ ಕುತೂಹಲ ಮೂಡಿಸಿದೆ.





