ಭಾರತೀಯ ಜನತಾ ಪಕ್ಷದ ಭದ್ರ ನೆಲೆಯಾದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಗಿಟ್ಟಿಸಲು ಜಗದೀಶ ಶೆಟ್ಟರ ಫಿಲ್ಡಿಗೆ ಇಳಿದಿದ್ದಾರೆ. ಹಾಲಿ ಸಂಸದರಾಗಿರುವ ಪ್ರಲ್ಲಾದ ಜೋಶಿಯವರ ಬದಲು ತನಗೆ ಟಿಕೇಟ ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಕಾಂಗ್ರೇಸ್ ಪಕ್ಷಕ್ಕೆ ಹೋಗಿ ಘರ್ ವಾಪಸಿಯಾಗಿರುವ ಶೆಟ್ಟರ, ಕೇಂದ್ರದ ನಾಯಕರ ಬಳಿ ಸ್ಪರ್ದಿಸುವ ಬಗ್ಗೆ ಹೇಳಿದ್ದಾರೆ.
ದೆಹಲಿಯಲ್ಲಿ ಪಕ್ಷದ ಹೈಕಮಾಂಡ ನಾಯಕರನ್ನು ಭೇಟಿ ಮಾಡಿ ಬಂದಿರುವ ಜಗದೀಶ ಶೆಟ್ಟರ, ನಾನು ಧಾರವಾಡ ಲೋಕಸಭಾ ಟಿಕೇಟಗೆ ಪ್ರಭಲ ಅಕಾಂಕ್ಷಿ ಎಂದು ಖಡಕ ದ್ವನಿಯಲ್ಲಿ ಹೇಳಿದ್ದಾರೆ.
ಹುಬ್ಬಳ್ಳಿಯ ಡೆನಿಸನ್ ಹೋಟೆಲನಲ್ಲಿ ಬಿಜೆಪಿ ಮುಖಂಡರ ನಡುವೆ ನಡೆದ ಸಭೆಯಲ್ಲಿ ಹೊರಬಿದ್ದ ವಿಚಾರಗಳು ಪಕ್ಷದಲ್ಲಿ ಎಲ್ಲವು ಸರಿ ಇಲ್ಲಾ ಎಂಬುದನ್ನು ಹೇಳುತ್ತಿವೆ. ಬೆಳಗಾವಿಗೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ದಾ ಎದುರು ಸಹ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೇಟ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಅದನ್ನು ಅಮಿತ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸುತ್ತಾರೆ ಎಂದು ನಡ್ದಾ ಹೇಳಿ ಕಳಿಸಿದ್ದಾರೆ ಎನ್ನಲಾಗಿದೆ.
ಧಾರವಾಡ ಲೋಕಸಭಾ ಟಿಕೇಟ್ ಕೊಡುವದರ ಬಗ್ಗೆ, ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು, ಹುಬ್ಬಳ್ಳಿ ಸೆಂಟ್ರಲ್ ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಕುಂದಗೋಳ ಶಾಸಕ ಎಮ್ ಆರ್ ಪಾಟೀಲ, ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಅಮೃತ ದೇಸಾಯಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಮುಖಂಡರ ಅಭಿಪ್ರಾಯ ಕೇಳಿದ್ದಾರೆ.
ಜೋಶಿ ಹಾಗೂ ಅರವಿಂದ ಬೆಲ್ಲದ ಇದ್ದ ಸಭೆಯಲ್ಲಿಯೇ ಜಗದೀಶ ಶೆಟ್ಟರ ಅವರು ” ನಾನು ಧಾರವಾಡ ಟಿಕೇಟ ಕೇಳುತ್ತಿದ್ದೇನೆ ಎಂದು ಹೇಳಿದ್ದು ” ಬಿಜೆಪಿ ಟಿಕೇಟಗಾಗಿ ಇಬ್ಬರು ದಿಗ್ಗಜ ನಾಯಕರ ನಡುವೆ ತೀವ್ರ ಪೈಪೋಟಿ ನಡೆದಿದೆ.





