Download Our App

Follow us

Home » ರಾಜಕೀಯ » ಬೆಂಗಳೂರಿನಲ್ಲಿ, ” ಕೆ ಎಚ್ ಪಾಟೀಲ ರಸ್ತೆ” ನಾಮಕರಣಕ್ಕೆ ಅಶ್ವಥ ನಾರಾಯಣ ವಿರೋದ

ಬೆಂಗಳೂರಿನಲ್ಲಿ, ” ಕೆ ಎಚ್ ಪಾಟೀಲ ರಸ್ತೆ” ನಾಮಕರಣಕ್ಕೆ ಅಶ್ವಥ ನಾರಾಯಣ ವಿರೋದ

ಸಹಕಾರ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ದಿವಂಗತ ಕೆ ಎಚ್ ಪಾಟೀಲರ ಹೆಸರಲ್ಲಿ ರಸ್ತೆ ನಾಮಕರಣಕ್ಕೆ ಮಾಜಿ ಉಪ ಮುಖ್ಯಮಂತ್ರಿ ಅಶ್ವಥ ನಾರಾಯಣ ವಿರೋದ ವ್ಯಕ್ತಪಡಿಸಿದ್ದಾರೆ. ಕೆ ಎಚ್ ಪಾಟೀಲ ಬದಲು ಬಿ ಎಸ್ ಯಡಿಯೂರಪ್ಪ ರಸ್ತೆ ನಾಮಕರಣ ಮಾಡಿ ಎಂದು ಕ್ಯಾತೆ ತೆಗೆದಿದ್ದಾರೆ.

ಬೆಂಗಳೂರಿನ ವಾರ್ಡ ಸಂಖ್ಯೆ 18 ರ, ರಾಧಾಕೃಷ್ಣ ವಾರ್ಡಿನ ಎಮ್ ಎಸ್ ರಾಮಯ್ಯ ಸಿಗ್ನಲದಿಂದ ಅಶ್ವಥ ನಗರದ ರಸ್ತೆಗೆ ಸಹಕಾರ ರಂಗದ ಭೀಷ್ಮ ಕೆ ಎಚ್ ಪಾಟೀಲ ರಸ್ತೆ ನಾಮಕರಣವನ್ನು ದಿನಾಂಕ 11 ರಂದು ಸೋಮವಾರ, ಹಮ್ಮಿಕೊಳ್ಳಲಾಗಿದೆ. ಆ ಕಾರ್ಯಕ್ರಮಕ್ಕೆ ತಾವು ಮುಖ್ಯ ಅತಿಥಿಗಳಾಗಿ ಬರಬೇಕು ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ ಪತ್ರ ಬರೆದು ಆಹ್ವಾನ ನೀಡಿದ್ದರು.

ಇದಕ್ಕೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಅಶ್ವಥ ನಾರಾಯಣ, ಅಲ್ಲಿ ಯಡಿಯೂರಪ್ಪನವರ ನಿವಾಸವಿದೆ. ಹಾಗಾಗಿ ಕೆ ಎಚ್ ಪಾಟೀಲ ರಸ್ತೆ ಬದಲು ಯಡಿಯೂರಪ್ಪ ರಸ್ತೆ ಎಂದು ನಾಮಕರಣ ಮಾಡಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯನ್ನು ಬಿಟ್ಟು ಬೇಕಾದರೆ ಬೇರೆ ಕಡೆ ಕೆ ಎಚ್ ಪಾಟೀಲ ರಸ್ತೆ ಎಂದು ನಾಮಕರಣ ಮಾಡಿ ಎಂದು ಪುಕ್ಕಟೆ ಸಲಹೆ ನೀಡಿದ್ದಾರೆ.

ಅಶ್ವಥ ನಾರಾಯಣ ಮಾತನ್ನು ಖಂಡಿಸಿರುವ  ಸಹಕಾರ ರಂಗದ ಕೆಲವರು, ಅಶ್ವಥ ನಾರಾಯಣ ಮೊದಲು ಕೆ ಎಚ್ ಪಾಟೀಲ ಅವರು ಯಾರು, ಅವರ ಕೊಡುಗೆ ಏನು ಎಂದು ತಿಳಿದು ಮಾತಾಡಲಿ, ಹಿರಿಯರಾಗಿದ್ದು, ಈ ಉದ್ಘಟತನದ ಹೇಳಿಕೆ ಸರಿಯಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ತಯಾರಿ : ಹೊಸ ಮುಖಕ್ಕೆ ಮಣೆ : ಅಚ್ಚರಿ ಅಭ್ಯರ್ಥಿ ಕಣಕ್ಕೆ

ಧಾರವಾಡ ಗ್ರಾಮೀಣ ಶಾಸಕರಾಗಿದ್ದ ವಿನಯ ಕರ್ಣಿಯವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗುವಂತೆ, ಇತ್ತ ಬಿಜೆಪಿ ಉಪ ಚುನಾವಣೆಗೆ ತಯಾರಿ ನಡೆಸಿದೆ. ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ

Live Cricket

error: Content is protected !!