Download Our App

Follow us

Home » ರಾಜಕೀಯ » ಧಾರವಾಡ ಕಾಂಗ್ರೇಸ್ ಅಭ್ಯರ್ಥಿ ಗೊಂದಲ. ಡಾ.ನಾಲವಾಡ, ವಿನೋದ ಅಸೂಟಿ ಮಧ್ಯೆ ಫೈಟ್

ಧಾರವಾಡ ಕಾಂಗ್ರೇಸ್ ಅಭ್ಯರ್ಥಿ ಗೊಂದಲ. ಡಾ.ನಾಲವಾಡ, ವಿನೋದ ಅಸೂಟಿ ಮಧ್ಯೆ ಫೈಟ್

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿನ ಕಾಂಗ್ರೇಸ್ ಅಭ್ಯರ್ಥಿಗೆ ಸಂಬಂಧಿಸಿದಂತೆ ಹೊಸ ಬೆಳವಣಿಗೆ ನಡೆದಿದೆ. ದೆಹಲಿ ಮಟ್ಟದಲ್ಲಿ ಹೊಸ ಹೆಸರೊಂದು ಸೇರ್ಪಡೆಯಾಗಿದೆ.

ಧಾರವಾಡ ಕ್ಷೇತ್ರದ ಕಾಂಗ್ರೇಸ್ ಟಿಕೇಟಗಾಗಿ ಡಾ. ನಾಲವಾಡ ಹೆಸರು ಕೇಳಿ ಬಂದಿದೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ, ನಾಲವಾಡರನ್ನು ಕಾಂಗ್ರೇಸ್ಸಿಗೆ ಕರೆತಂದು ಅಭ್ಯರ್ಥಿಯನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಟಿಕೇಟಗಾಗಿ ವಿನೋದ ಅಸೂಟಿ ಮತ್ತು ಡಾ. ನಾಲವಾಡ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಇಷ್ಟು ದಿನ ಟಿಕೇಟ ರೇಸಿನಲ್ಲಿದ್ದ, ಮಾಜಿ ವಿಧಾನ ಪರಿಷತ ಸದಸ್ಯ ಮೋಹನ ಲಿಂಬಿಕಾಯಿಯವರ ಹೆಸರಿನ ಬದಲು ಇದೀಗ ನಾಲವಾಡರ ಹೆಸರು ಮುಂಚೂಣಿಯಲ್ಲಿದೆ.

ಒಂದು ವೇಳೆ ಡಾ. ನಾಲವಾಡರಿಗೆ ಕಾಂಗ್ರೇಸ್ ಟಿಕೇಟ ಸಿಕ್ಕಲ್ಲಿ, ಮೂಲ ಹಾಗೂ ವಲಸಿಗ ಕಾಂಗ್ರೇಸ್ಸಿಗರ ಮಧ್ಯೆ ಬಿರುಕು ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕುತೂಹಲಕ್ಕೂ ಕಾರಣವಾಗಲಿದೆ.

ಅಲ್ಲದೆ ವಿನೋದ ಅಸೂಟಿ ಜೊತೆ ಸುರ್ಜಿವಾಲಾ ಈಗಾಗಲೇ ಎರಡು ಸುತ್ತಿನ ಚರ್ಚೆ ನಡೆಸಿದ್ದು, ವಿನೋದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಚರ್ಚೆ ನಡೆಸಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸರನ್ನು ಬಗ್ಗಿಸಿದ ಗಾಂಜಾ ಮಾಫಿಯಾ : ನಾಲ್ವರ ಅಮಾನತು. ಎಚ್ಚರಿಕೆಯ ಹೆಜ್ಜೆ ಇಡತ್ತಾ ಬಿಜೆಪಿ

ಕಳೆದ ನಾಲ್ಕೈದು ದಿನಗಳಿಂದ ಧಾರವಾಡದಲ್ಲಿ ಒಬ್ಬ ವಿದ್ಯಾರ್ಥಿಯ ಆತ್ಮಹತ್ಯೆಯ ಹಿನ್ನೆಲೆಯಲ್ಲಿ, ರೋಚಕ ಮಾಹಿತಿಗಳು ಹೊರಬೀಳುತ್ತಿವೆ.  ಧಾರವಾಡ ಗಾಂಜಾ ಮುಕ್ತವಾಗಬೇಕು ಎಂದು ಉದ್ದುದ್ದ ಭಾಷಣ ಬಿಗಿಯುವ ರಾಜಕಾರಣಿಗಳು, ಗಾಂಜಾ

Live Cricket

error: Content is protected !!