ಲೋಕಸಭಾ ಚುನಾವಣೆ ಕರ್ನಾಟಕದ ರಾಜಕಾರಣವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಭಿನ್ನಮತದ ಜ್ವಾಲೆ ಹೊತ್ತಿ ಉರಿಯುತ್ತಿದೆ.
ಬಾಗಲಕೋಟ ಕ್ಷೇತ್ರದ ಲೋಕಸಭಾ ಕ್ಷೇತ್ರದ ಟಿಕೇಟ ವೀಣಾ ಕಾಶಪ್ಪನವರಗೆ ತಪ್ಪಿದ ಪರಿಣಾಮ ಪಂಚಮಸಾಲಿ ನಾಯಕ ಕಾಂಗ್ರೇಸ್ ಸರ್ಕಾರಕ್ಕೆ ಸಖತ್ ಪಂಚ ನೀಡಿದ್ದಾರೆ.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ತಮ್ಮ ಧರ್ಮ ಪತ್ನಿ ವೀಣಾಗೆ ಯಾವದೇ ಕಾರಣ ನೀಡದೆ ಟಿಕೇಟ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದು, ಸಚಿವ ಶಿವಾನಂದ ಪಾಟೀಲರ ಮಗಳು ಸಂಯುಕ್ತ ಪಾಟೀಲಗೆ ಟಿಕೇಟ್ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
5 ವರ್ಷ ಬಾಗಲಕೋಟ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ ವೀಣಾ ಕಾಶಪ್ಪನವರ ಬದಲು ಕ್ಷೇತ್ರದ ಪರಿಚಯ ಇಲ್ಲದ ಸಂಯುಕ್ತ ಪಾಟೀಲಗೆ ಟಿಕೇಟ್ ನೀಡಲಾಗಿದೆ. ಸಂಯುಕ್ತ ಪಾಟೀಲ ಹೇಗೆ ಗೆಲ್ತಾರೆ ನೋಡ್ತೀನಿ ಎಂದು ವಿಜಯಾನಂದ ಕಾಶಪ್ಪನವರ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
Author: Karnataka Files
Post Views: 5





