ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಇಡೀ ದೇಶ ಕಾಯುತ್ತಿದೆ. ಐತಿಹಾಸಿಕ ಸಮಾರಂಭ ಕಣ್ತುಂಬಿಕೊಳ್ಳಲು ಭಕ್ತರು ಸಜ್ಜಾಗಿದ್ದಾರೆ.
ಅಂದ ಹಾಗೆ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಟಾಪನೆಗೊಳ್ಳಲು, ಮೈಸೂರಿನಲ್ಲಿ ತಯಾರಾದ ಶ್ರೀರಾಮನ ವಿಗ್ರಹ ಆಯ್ಕೆಯಾಗಿದೆ. ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ ಯೋಗಿರಾಜರ ಕೈಚಳಕದಲ್ಲಿ ಕೆತ್ತನೆ ಮಾಡಲಾದ ಶ್ರೀರಾಮನ ವಿಗ್ರಹ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಟಾಪನೆಗೊಳ್ಳಲಿದೆ.
ರಾಮ ಮಂದಿರದಲ್ಲಿ ಪ್ರತಿಷ್ಟಾಪನೆಗೊಳ್ಳಲಿರುವ ಶ್ರೀರಾಮ ವಿಗ್ರಹದ ಮತ್ತೊಂದು ವಿಶೇಷತೆ ಏನೆಂದರೆ, ಎಚ್ ಡಿ ಕೋಟೆಯ ಕಲ್ಲಿನಿಂದ ಶ್ರೀರಾಮನ ವಿಗ್ರಹದ ಕೆತ್ತನೆ ಮಾಡಲಾಗಿದೆ.
ಕರ್ನಾಟಕದ ಮೈಸೂರಿನಲ್ಲಿ ಕೆತ್ತನೆಗೊಂಡ ಶ್ರೀರಾಮನ ವಿಗ್ರಹ, ಅಯೋಧ್ಯೆಯ ರಾಮ ಮಂದಿರದಲ್ಲಿ ವಿರಾಜಮಾನವಾಗಲಿದ್ದು, ಇದೇ ತಿಂಗಳು 22 ರಂದು ರಾಮ ಮಂದಿರದ ಉದ್ಘಾಟನೆ ನಡೆಯಲಿದೆ. ಅಯೋಧ್ಯೆಯಲ್ಲಿ ಭರದ ಸಿದ್ಧತೆ ನಡೆದಿದ್ದು, ಈಗಾಗಲೇ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡಿದೆ.
Author: Karnataka Files
Post Views: 9





