ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕಾಂಗ್ರೇಸ್ ಅಂಗಳದಿಂದ ಹೊರಗೆ ಬಂದ ಬಳಿಕ ಮೊದಲ ಬಾರಿಗೆ ಕಾಂಗ್ರೇಸ್ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ಜಗದೀಶ ಶೆಟ್ಟರ, ಕಾಂಗ್ರೇಸ್ ಸರ್ಕಾರದಲ್ಲಿ ನಡೆದಿರುವ ಬ್ರಷ್ಟಾಚಾರದ ಬಗ್ಗೆ ಕಿಡಿ ಕಾರಿದ್ದಾರೆ. ಕಾಂಗ್ರೇಸ್ ಸರ್ಕಾರದಲ್ಲಿ ಫೈಲ್ ಗಳು ಕ್ಲಿಯರ್ ಆಗ್ತಿಲ್ಲ ಎಂದಿದ್ದಾರೆ. ಬ್ರಷ್ಟಾಚಾರ ತಾಂಡವವಾಡುತ್ತಿದ್ದು, ಹಣ ಇಲ್ಲದೆ ಯಾವ ಕೆಲಸವು ನಡೆಯಲ್ಲ ಎಂದು ಶೆಟ್ಟರ ಆರೋಪಿಸಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೇಸ್ ಸೇರಿದ್ದ ಜಗದೀಶ ಶೆಟ್ಟರ, ಬಿಜೆಪಿ ಮುಳುಗುವ ಹಡಗು ಎಂದಿದ್ದ ಶೆಟ್ಟರ, ಬಿಜೆಪಿ ನಾಯಕನಿಲ್ಲದ ಪಕ್ಷ ಎಂದು ಹೇಳಿದ್ದರು. ಇದೀಗ ಮತ್ತೆ ಬಿಜೆಪಿಗೆ ವಾಪಸಾದ ಬಳಿಕ ಕಾಂಗ್ರೇಸ್ ಮೇಲೆ ಕಿಡಿ ಕಾರಿರುವ ಜಗದೀಶ ಶೆಟ್ಟರ, ಕಾಂಗ್ರೇಸ್ ಸರ್ಕಾರದಿಂದ ಜನ ರೋಸಿ ಹೋಗಿದ್ದಾರೆ ಎಂದಿದ್ದಾರೆ.
ಮತ್ತೊಂದು ಸ್ಪೋಟಕ ಸುದ್ದಿ ನೀಡಿರುವ ಶೆಟ್ಟರ, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಪ್ರಲ್ಹಾದ ಜೋಶಿಯವರಿಗೆ ನಾನೇ ಪಕ್ಷದ ಟಿಕೇಟ್ ಕೊಡಿಸಿದ್ದೆ ಎಂದು ಹೇಳಿದ್ದಾರೆ.





