Download Our App

Follow us

Home » ಕರ್ನಾಟಕ » ಹೋರಾಟ ಹತ್ತಿಕ್ಕುವ ಕುತಂತ್ರ ಮಾಡಿದ್ದರಿಂದಲೇ ರಾದ್ಧಾಂತ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಿಡಿ

ಹೋರಾಟ ಹತ್ತಿಕ್ಕುವ ಕುತಂತ್ರ ಮಾಡಿದ್ದರಿಂದಲೇ ರಾದ್ಧಾಂತ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಿಡಿ

2ಎ ಮೀಸಲಾತಿಗಾಗಿ ನಡೆಯುತ್ತಿದ್ದ ಹೋರಾಟವನ್ನ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹತ್ತಿಕ್ಕುವ ಕುತಂತ್ರ ಮಾಡಿದ್ದರಿಂದಲೇ ಇಷ್ಟೊಂದು ರಾದ್ಧಾಂತ ನಡೆದಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಕಿಡಿಕಾರಿದರು.

ಶ್ರೀಗಳ ನೇತೃತ್ವದಲ್ಲಿ ನಡೆದ ಹೋರಾಟ ಶಾಂತಿಯುತವಾಗಿ ನಡೆದಿತ್ತು. ಆದರೆ, ವ್ಯವಸ್ಥಿತವಾಗಿ ಹೋರಾಟವನ್ನ ಮಣಿಸುವ ಯತ್ನ ನಡೆಯಿತ್ತಲ್ಲದೇ, ಹಲವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ ಎಂದರು.

ರಾಜ್ಯ ಸರಕಾರದ ಈ ಕ್ರಮದಿಂದ ಹೋರಾಟ ನಿಲ್ಲೋದಿಲ್ಲ. ಇದಕ್ಕೆ ತಕ್ಕ ಪಾಠವನ್ನ ಸಮಾಜ ಕಲಿಸಲಿದೆ ಎಂದು ಎಚ್ಚರಿಸಿದ ಮಾಜಿ ಸಚಿವರು, ನಾಳೆ ನಡೆಯುವ ಹೋರಾಟದಲ್ಲಿ ಭಾಗವಹಿಸುವುದಾಗಿ ಹೇಳಿದರು.

ಬಿಜೆಪಿ ಸರಕಾರ ಆಡಳಿತದಲ್ಲಿ ಇದ್ದಾಗಲೂ ಹೋರಾಟ ನಡೆದಿದೆ. ಲಕ್ಷಾಂತರ ಜನ ಸೇರಿದ್ದರೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ, ನಿನ್ನೆಯ ವಿಚಾರ ಮನಸ್ಸಿಗೆ ನೋವನ್ನುಂಟು ಮಾಡಿದೆಯಲ್ಲದೇ, ಮುಖ್ಯಮಂತ್ರಿ ಅವರ ಭಾವನೆ ಏನು ಎಂಬುದು ಬಹಿರಂಗಗೊಂಡಿದೆ ಎಂದರು.

 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ವಿರುದ್ದ ರಾಜಕೀಯ ಶಡ್ಯಂತ್ರ : ಧಾರವಾಡದಲ್ಲಿ ಮೌನ ಮೆರವಣಿಗೆ

ಧಾರವಾಡದಲ್ಲಿಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಪರವಾಗಿ ಬೃಹತ್ ಮೌನ ಮೆರವಣಿಗೆ ನಡೆಯಿತು. ಕಲಾಭಾವನದಿಂದ ಆರಂಭವಾದ ಮೌನ ಮೆರವಣಿಗೆ ಕೆಸಿಸಿ ಬ್ಯಾಂಕ್ ವರೆಗೆ ಸಾಗಿತು. ಮೆರವಣಿಗೆಯಲ್ಲಿ

Live Cricket

error: Content is protected !!