Download Our App

Follow us

Home » ಕರ್ನಾಟಕ » ಧಾರವಾಡ ದಲಾಲ ಮತ್ತು ವರ್ತಕರ ಸಂಘಕ್ಕೆ ಅಧ್ಯಕ್ಷರಾಗಿ ಶಿವಶಂಕರ ಹಂಪಣ್ಣವರ ಆಯ್ಕೆ

ಧಾರವಾಡ ದಲಾಲ ಮತ್ತು ವರ್ತಕರ ಸಂಘಕ್ಕೆ ಅಧ್ಯಕ್ಷರಾಗಿ ಶಿವಶಂಕರ ಹಂಪಣ್ಣವರ ಆಯ್ಕೆ

ಧಾರವಾಡ ದಲಾಲ ಮತ್ತು ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಸತತ ಆರನೇ ಬಾರಿಗೆ ಹಿರಿಯ ವ್ಯಾಪಾರಸ್ಥ ಶಿವಶಂಕರ ಹಂಪಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಮಂಗಳವಾರ ಬಸವಂತಪ್ಪ‌ ಪೂಜಾರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಘದ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ನೂತನ ಅಧ್ಯಕ್ಷರಾಗಿ ಶಿವಶಂಕರ ಹಂಪಣ್ಣವರ ಅವಿರೋಧವಾಗಿ ಆಯ್ಕೆಯಾದರು.

ಈ ಮೂಲಕ ಸತತ ಆರನೇ ಬಾರಿಗೆ ಹಂಪಣ್ಣವರ ಆಯ್ಕೆಯಾದಂತಾಗಿದೆ.

ನೂತನ ಪದಾಧಿಕಾರಿಗಳಾಗಿ ತಮ್ಮಣ್ಣ ಯಂಡಿಗೇರಿ (ಉಪಾಧ್ಯಕ್ಷ), ಬಸವರಾಜ ತೆಗ್ಗಿ (ಕಾರ್ಯದರ್ಶಿ), ರಾಜೇಂದ್ರ ಜಾಧವ (ಜಂಟಿ ಕಾರ್ಯದರ್ಶಿ),ಬಸವರಾಜ ಸುರೇಬಾನ (ಖಜಾಂಚಿ), ಎಸ್.ವೈ. ಸಂಕೋಜಿ, ಸಂಗಪ್ಪ‌ ಕಪಲಿ, ಮೈನುದ್ದೀನ್ ಅಮ್ಮಿನಭಾವಿ, ಶಂಕರ‌ ಬೆಂಡಿಗೇರಿ, ಉಮೇಶ ಗುಡ್ಡದ, ಈರಣ್ಣ ಹಂಚಿನಮನಿ(ಕಾ.ಕಾ.ಸಮಿತಿ ಸದಸ್ಯರು), ಎಸ್.ಜಿ.ಖಾನಗೌಡ್ರ, ಎಂ.ಎಫ್. ಬಾಳನಗೌಡ್ರ, ಮಲ್ಲಿಕಾರ್ಜುನ ‌ನಂದಿಗೋಳ, ರಾಜು ಮಟ್ಟಿ, ವೈ.ಎಸ್. ಮುಂದಿಮನಮನಿ ಆಯ್ಕೆಯಾಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!